ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ. ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ. ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ. ಉದಾಹರಣೆಗಳು: ದೇವ + ಈಶ = ದೇವೇಶ (ಅ+ಈ=ಏ) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)